ಗ್ರಾಮೀಣ ಶಿಕ್ಷಕರ ಸಂಘದ ವಿವಿಧ ಬೇಡಿಕೆಗಳ ಮನವಿಗೆ ಸಂದಿಸಿದ ವಿ.ಪ.ಸ. ಬಸವರಾಜ ಹೊರಟ್ಟಿ
ಗ್ರಾಮೀಣ ಶಿಕ್ಷಕರ ಸಂಘದ ವಿವಿಧ ಬೇಡಿಕೆಗಳ ಮನವಿಗೆ ಸಂದಿಸಿದ ವಿ.ಪ.ಸ. ಬಸವರಾಜ ಹೊರಟ್ಟಿ..
ಹುಬ್ಬಳ್ಳಿ:
ಹುಬ್ಬಳ್ಳಿ ನಗರದ ವಿ.ಪ.ಸ.ಬಸವರಾಜ ಹೊರಟ್ಟಿಯವರ ಗೃಹ ಕಚೇರಿಯಲ್ಲಿ ರವಿವಾರ ಮುಂಜಾನೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟ ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲಾ ಘಟಕ ಇವರ ಅಡಿಯಲ್ಲಿ ರಾಜ್ಯಾಧ್ಯಕ್ಷರಾದ ಅಶೋಕ.ಎಮ್.ಸಜ್ಜನ.ಇವರ ನೇತೃತ್ವದ ನಿಯೋಗದೊಂದಿಗೆ ವಿ.ಪ.ಸ.ಬಸವರಾಜ ಹೊರಟ್ಟಿಯವರಿಗೆ ಲಿಖಿತ ಮನವಿ ಸಲ್ಲಿಸಿ ಪ್ರಸ್ತುತ ಶಿಕ್ಷಕರ ಬೇಕು ಬೇಡಿಕೆಗಳ ಕುರಿತು ಚರ್ಚಿಸಿ ಅಂಶಗಳ ಮನವರಿಕೆಮಾಡಿಕೊಳ್ಳಲಾಯಿತು.
ವೇಳೆ ಮಾತನಾಡಿದ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟ,ಶಾಲೆಗಳ ದಸರಾ ರಜೆ ವಿಸ್ತರಣೆ ಕುರಿತು ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತೇನೆ ಮತ್ತು ಇಂದೇ ಅವರೊಂದಿಗೆ ಮಾತನಾಡುತ್ತೇನೆ.ಹಾಗೂ ರಾಜ್ಯಾದ್ಯಂತ ಹೊಸ ತಾಲೂಕುಗಳಿಗೆ ಹೊಸ ಬಿ.ಇ.ಓ.ಕಚೇರಿಗಳನ್ನು ಅತೀ ಶೀಘ್ರದಲ್ಲಿ ಪ್ರಾರಂಭವಾಗಲಿವೆ ಎಂದರು. ಜೊತೆಗೆ ಗ್ರಾಮೀಣ ಶಿಕ್ಷಕರ ಭತ್ಯೆ ,ಉತ್ತರ ಕರ್ನಾಟಕದಲ್ಲಿ ಬೃಹತ್ ಶಿಕ್ಷಕ ಸದನ, ವರ್ಗಾವಣೆ ಸೇವೆಯಲ್ಲಿ ಒಂದು ಬಾರಿ ಬಯಸಿದ ಜಿಲ್ಲೆಗೆ ವರ್ಗಾವಣೆ ಮುಂತಾದ ಬೇಡಿಕೆಗಳ ಕುರಿತು ಸರರ್ಕಾರದ ಗಮನ ಸೆಳೆಯುತ್ತೇನೆ ಎಂದರು.
ನಮ್ಮೊಂದಿಗೆ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಿ.ಆರ್.ಭಟ್ ರವರು ನಮ್ಮ ಬೇಡಿಕೆ ಸ್ತುತ್ಯವಾಗಿವೆ ಎಂದು ಬೆಂಬಲಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಸತತ ಎಂಟು ಬಾರಿ ಸತತವಾಗಿ ವಿ.ಪ.ಶಾಸಕರಾಗಿ ಚುನಾಯಿತರಾಗಿ ವಿಶ್ವ ದಾಖಲೆ ನಿರ್ಮಿಸಿದ ಹಿರಿಯಾತಿಹಿರಿಯ ಜನನಾಯಕರಿಗೆ ಗ್ರಾಮೀಣ ಶಿಕ್ಷಕರ ಸಂಘದಿಂದ ಸತ್ಕರಿಸಿ ಗೌರವಿಸಲಾಯಿತು.
ನಿಯೋಗದಲ್ಲಿ ರಾಜ್ಯಾಧ್ಯಕ್ಷರಾದ ಅಶೋಕ.ಎಮ್.ಸಜ್ಜನ.ಸಲಹಾ ಸಮಿತಿ ಅಧ್ಯಕ್ಷರಾದ ಗೋವಿಂದ ಜುಜಾರೆ.ಸದಸ್ಯರಾದ ಡಿ.ಟಿ.ಭಂಡಿವಡ್ಡರ. ಜಿಲ್ಲಾ ಉಪಾಧ್ಯಕ್ಷರಾದ ಎಮ್.ಬಿ.ಯಾದೂಸಾಬನವರ.ಆನಂದ ದುಂದೂರ.ಮುಂತಾದವರಿದ್ದರು.