news

The state government has given a very sweet news to the government employees.

ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ..

ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ..

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪುಣ್ಯಕೋಟಿ ದತ್ತು ಯೋಜನೆಗೆ ತಮ್ಮ ಒಂದು ದಿನದ ಸಂಬಳ ನೀಡಿ, ಸರ್ಕಾರಕ್ಕೆ 100 ಕೋಟಿ ರೂ. ದೇಣಿಗೆ ನೀಡುವ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯವರಿಗೆ ನೀಡಿದರು.

ಈ ಸಂದರ್ಭದಲ್ಲಿ ಪಶು ಸಂಗೋಪನಾ ಸಚಿವ ಪ್ರಭುಚೌಹ್ವಾಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಇದೆ  ಸಂದರ್ಭದಲ್ಲಿ ಪಬ್ಲಿಕ್ ಟುಡೆಯೊಂದಿಗೆ ಮಾತನಾಡಿದ ಸಿ‌.ಎಸ್.ಷಡಕ್ಷರಿಯವರು, ಏಳನೇ ವೇತನ ಆಯೋಗವನ್ನು ಈ ತಿಂಗಳಿನಲ್ಲೆ (ಅಕ್ಟೋಬರ್ ತಿಂಗಳ) ಅಂತ್ಯದೊಳಗೆ ರಚನೆ ಮಾಡಲಾಗುವುದೆಂದು ಮುಖ್ಯ ಮಂತ್ರಿಗಳು ತಿಳಿಸಿದ್ದಾರೆ ಎಂದರು. ವೇತನ ಆಯೋಗ ರಚನೆ ಸಂಬಂಧಿಸಿದಂತೆ ಇದೇ ತಿಂಗಳಲ್ಲಿ ಸೂಕ್ತವಾದ ವ್ಯಕ್ತಿಯನ್ನು ಹುಡುಕಿ ಆಯೋಗ ರಚನೆ ಮಾಡಲಾಗುವುದೆಂದು ತಿಳಿಸಿದರು. ನಿವೃತ್ತಿ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ವೇತನ ರಚನೆ ಮಾಡುವುದಿಲ್ಲ,ಬದಲಾಗಿ ಬೆರೆ ಅಧಿಕಾರಿಗಳ ನೇತೃತ್ವದಲ್ಲಿ ವೇತನ ಆಯೋಗ ರಚನೆಯಾಗುತ್ತದೆ ಎಂದರು..

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಹಾಗೂ ಮಾನ್ಯ ಸಿ.ಎಸ್.ಷಡಕ್ಷರಿಯವರ ಮೇಲೆ ನಮ್ಮ ರಾಜ್ಯದ ನೌಕರರು ಬಹಳಷ್ಟು ನಂಬಿಕೆ,ಗೌರರವನ್ನು ಇಟ್ಟುಕೊಂಡಿದ್ದಾರೆ.

ಈ ಮೋದಲು ಸರ್ಕಾರಿ ನೌಕರರ ಸಮಾರಂಭದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಕ್ಟೋಬರ್‌ ತಿಂಗಳಿನಲ್ಲಿಯೇ ವೇತನ ಆಯೋಗ ರಚನೆ ಮಾಡಲಾಗುವುದೆಂದು ಹೇಳಿದ್ದರು.

ವೇತನ ಆಯೋಗ ರಚನೆ ಹಾಗೂ ಪುಣ್ಯಕೋಟಿ ದತ್ತು ಯೋಜನೆ ಸಂಭಂಧಿಸಿದಂತೆ ಮಾತ್ರ ಮುಖ್ಯ ಮಂತ್ರಿಯವರ ಜೊತೆ ಮಾತುಕತೆ ನಡೆದಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ‌.ಎಸ್.ಷಡಕ್ಷರಿಯವರು ಪಬ್ಲಿಕ್ ಟುಡೆಯೊಂದಿಗೆ ಮಾಹಿತಿ ಹಂಚಿಕೊಂಡರು..

Related Articles

Leave a Reply

Your email address will not be published. Required fields are marked *

Back to top button