01. DAR PC ಗೆ ಎರಡು ಅರ್ಜಿ ಸಲ್ಲಿಸಬಹುದೇ ?
_ಹೌದು ಸಲ್ಲಿಸಬಹುದು. ವೆಬ್ಸೈಟ್ನಲ್ಲಿ ಎರಡು ಪ್ರತ್ಯೇಕ ಅರ್ಜಿಗಳು ಕೊಟ್ಟಿರುವುದರಿಂದ ಎರಡು ಅರ್ಜಿ ಸಲ್ಲಿಸಬಹುದು. ಆದರೆ_
A. HK ಅಭ್ಯರ್ಥಿ : _HK ಅಭ್ಯರ್ಥಿ HK ಭಾಗದ ಯಾವುದಾದರೂ ಒಂದು ಜಿಲ್ಲೆಗೆ ಮತ್ತು NHK ಭಾಗದ ಯಾವುದಾದರೂ ಒಂದು ಜಿಲ್ಲೆಗೆ ಮಾತ್ರ ಪ್ರತ್ಯೇಕವಾಗಿ 02 ಅರ್ಜಿ ಸಲ್ಲಿಸಬಹುದು_ .
_ಅಂದ್ರೆ NHK ಅಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಲು ಬರುವುದಿಲ್ಲ. HK ಅಲ್ಲಿ ಕೂಡ ಎರಡು ಅರ್ಜಿ ಸಲ್ಲಿಸಲು ಬರುವುದಿಲ್ಲ. HK ಅಲ್ಲಿ ಒಂದು, NHK ಅಲ್ಲಿ ಒಂದು ಅರ್ಜಿ ಮಾತ್ರ ಸಲ್ಲಿಸಬೇಕು._
b.NHK ಅಭ್ಯರ್ಥಿ : _NHK ಅಭ್ಯರ್ಥಿಯು NHK ಭಾಗದ ಯಾವುದಾದರೂ ಒಂದು ಜಿಲ್ಲೆಯಲ್ಲಿ ಒಂದು ಅರ್ಜಿಯನ್ನು ಮತ್ತು HK ಭಾಗದ ಯಾವುದಾದರೂ ಒಂದು ಜಿಲ್ಲೆಯಲ್ಲಿ ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಮಾತ್ರ (20%) ಅರ್ಜಿ ಸಲ್ಲಿಸಬಹುದು. ಅಂದರೆ NHK ಭಾಗದಲ್ಲಿ ಒಂದಕ್ಕಿಂತ ಹೆಚ್ಚು ಜಿಲ್ಲೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ. HK ಭಾಗದಲ್ಲಿ 20% ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.
ಒಟ್ಟು ಎರಡು ಅರ್ಜಿಗಳು, ಆದರೆ HK ಒಂದೇ NHK ಒಂದೇ….
2. HK, NHK DAR PC EXam ಬೇರೆ ಬೇರೆ ನಡಿಯುತ್ತ ಅಥವಾ ಒಂದೇ exam?
_ಇದರ ಬಗ್ಗೆ ಯಾವದೇ ಮಾಹಿತಿ ಇಲ್ಲಾ.._
_ಒಂದೇ ಎಕ್ಸಾಮ್ ನಡೆದರು ಆಯ್ಕೆ ಪಟ್ಟಿಗಳು ಬೇರೆ ಬೇರೆ ಇರುತ್ತವೆ, ಪ್ರತ್ಯೇಕ ಪರೀಕ್ಷೆ ನಡೆದರೂ ಆಯ್ಕೆ ಪಟ್ಟಿ ಬೇರೆ ಇರುತ್ತದೆ.._
3. DAR PC physical ನಾವು ಆಯ್ಕೆ ಮಾಡಿಕೊಂಡ ಜಿಲ್ಲೆಯಲ್ಲಿ ನಡೆಯುತ್ತದೆ ಅಥವಾ ಸ್ವಂತ ಜಿಲ್ಲೆಯಲ್ಲಿ ನಡೆಯುತ್ತದೆಯೋ ?
_ದೈಹಿಕ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಆರೋಪಗಳು ಕೇಳಿ ಬಂದಿರುವುದರಿಂದ ಈ ಸಲ ದೈಹಿಕ ಪರೀಕ್ಷೆಯು ಯಾವ ತರ ನಡೆಯುತ್ತಿದೆ ಎಂದು ಗೊತ್ತಿಲ್ಲ. ಹಾಗಾಗಿ ಅಭ್ಯರ್ಥಿಗಳು ಎಲ್ಲಿಯ ನಡೆದರೂ ಕೂಡ ಎದುರಿಸಲು ಸಿದ್ಧರಿರಬೇಕು.._
4. DAR PC ಯಾವ ಜಿಲ್ಲೆಗೆ ಹಾಕಬೇಕು ? ಯಾವ ಜಿಲ್ಲೆಗೆ ಕಡಿಮೆ ಕಟ್ ಆಫ್ ನಿಲ್ಲುತ್ತದೆ ?
_ಇದು ಯಾರಿಂದಲೂ ಕೂಡ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಿಂದಿನ ವರ್ಷದ ಕಟ್ ಆಫ್ ಗೂ ಈ ವರ್ಷದ ಕಟ್ ಆಫ್ ಗೂ ಯಾವುದೇ ಸಂಬಂಧ ವಿರುವುದಿಲ್ಲ._
_ಪ್ರಶ್ನೆ ಪತ್ರಿಕೆಯ ಗುಣಮಟ್ಟ ಮತ್ತು ಆಯಾ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆಗನುಗುಣವಾಗಿ cut off ನಿಲ್ಲುತ್ತೆ._
_ಹೆಚ್ಚು ಹುದ್ದೆಗಳು ಇರುವಲ್ಲಿ ಕೆಲವೊಂದು ಸಲ ಕಡಿಮೆ ಕಟ್ ಆಫ್ ನಿಂತರೆ , ಕೆಲವು ಬಾರಿ ಹೆಚ್ಚು ಕಟ್ ಆಫ್ ನಿಂತಿದೆ._
_ಹಾಗಾಗಿ ನೀವು ಯಾವ ಜಿಲ್ಲೆಯನ್ನು ಆಯ್ದುಕೊಳ್ಳಬೇಕು ಎಂಬುದನ್ನು ನಿರ್ಧರಿಸುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಿ._
I. _ನಿಮ್ಮ ಸ್ವಂತ ಜಿಲ್ಲೆ ಬೇಕಿದ್ದರೆ cut off ಎಷ್ಟೇ ನಿಲ್ಲಲಿ ಆಳವಾಗಿ ಮತ್ತು ಉತ್ತಮವಾಗಿ ಅಧ್ಯಯನ ಮಾಡಿ. 85ಕ್ಕೂ ಅಧಿಕ ನಿಮ್ಮ ಟಾರ್ಗೆಟ್ ಇರಲಿ._
II. ಯಾವ ಜಿಲ್ಲೆ ಆದರೂ ಇರಲಿ ನಮಗೆ ಹುದ್ದೆಗೆ ಆಯ್ಕೆಯಾದರೆ ಸಾಕು ಎನ್ನುವವರು…
ನಿಮಗೆ ಲಭ್ಯವಿರುವ ವಿಶೇಷ ಮೀಸಲಾತಿಗಳು PDP, RURAL CASTE KANNADA MEDIUM ಇವುಗಳನ್ನು ಮೊದಲು ಲೆಕ್ಕ ಹಾಕಿ, ಅತಿ ಹೆಚ್ಚು ಯಾವ ಜಿಲ್ಲೆಗೆ ಇವೆ ಎಂಬುದನ್ನು ನೋಡಿ . ನಂತರ GM ಹುದ್ದೆಗಳನ್ನು ಸೇರಿಸಿ. ಆವಾಗ ನಿಮಗೆ ಒಟ್ಟು ಎಷ್ಟು ಹುದ್ದೆಗಳು ದೊರೆಯುತ್ತವೆ ಎಂಬುದು ಗೊತ್ತಾಗುತ್ತದೆ. ಈ ಮಾದರಿಯನ್ನು ಅನುಸರಿಸುವಾಗ GM ಹೊರತುಪಡಿಸಿರುವ ಹುದ್ದೆಗಳ ಬಗ್ಗೆ ಮಾತ್ರ ಲೆಕ್ಕ ಹಾಕಿ.
_ಸಾಮಾನ್ಯವಾಗಿ ಹೆಚ್ಚು ಹುದ್ದೆಗಳು ಇರುವ ಜಿಲ್ಲೆಯಲ್ಲಿ ಹೆಚ್ಚು ನಿಮಗೆ ಹುದ್ದೆಗಳು ದೊರೆಯುತ್ತವೆ. ಕೆಲವೊಂದು ಸಲ ಅಲ್ಲಿಯೇ ಸ್ಪರ್ಧೆ ಹೆಚ್ಚು ಇರುತ್ತದೆ . ಹಾಗಾಗಿ ನೀವು ಯಾವ ಜಿಲ್ಲೆಗೆ ಹಾಕುತ್ತಿರೋ ಅದು ನಿಮ್ಮ ಆಯ್ಕೆಯೇ ಆಗಿರಲಿ._
ಏಕೆಂದರೆ ಒಂದು ವೇಳೆ ನೀವು ಆಯ್ಕೆಯಾಗದೆ ಇದ್ದಲ್ಲಿ ಬೇರೆಯವರನ್ನು ದೋಷಿಸುವುದು ತಪ್ಪುತ್ತದೆ.
_ಆಯ್ಕೆ ಅಂತಿಮ ನಿರ್ಧಾರ ನಿಮ್ಮದೇ ಆಗಿರಲಿ ಅದಕ್ಕೆ ತಕ್ಕಂತೆ ತಯಾರಿ ಮಾಡಿ._
5. CIVIL PC, DAR AGE limit increase ಮಾಡತಾರ ?
_Present ಆಗಿ ಆಗಲ್ಲ ಅಂತ ಮಾನ್ಯ ಗೃಹ ಮಂತ್ರಿಗಳು ಹೇಳಿದ್ದಾರೆ. ಆದರೆ ಇದು ಸಂಪೂರ್ಣವಾಗಿ ಆಕಾಂಕ್ಷಿಗಳ ಒಗ್ಗಟ್ಟು ಮತ್ತು ನಾನು ಆಡಳಿತದಲ್ಲಿರುವ ಸರ್ಕಾರದ ಮೇಲೆ ನಿಂತಿದೆ. ಸರ್ಕಾರ ಮನಸ್ಸು ಮಾಡಿದರೆ ಅಧಿಸೂಚನೆ ಹೊರಡಿಸಿದ ನಂತರವೂ ಕೂಡ ವಯೋಮಿತಿ ಹೆಚ್ಚಿಸಬಹುದು._
_ಕನಿಷ್ಠ 2 ಎರಡು ವರ್ಷ ಹೆಚ್ಚಿಸಿದರೆ ಎಷ್ಟೋ ಜನರಿಗೆ ಉಪಯೋಗವಾಗುತ್ತದೆ._
6. PSI RSI ಸೇರಿದಂತೆ ಪೊಲೀಸ್ ಇಲಾಖೆಯ ಪರೀಕ್ಷೆಗಳು ಯಾವಾಗ ನಡೆಯುತ್ತವೆ ?
_ಈ ವರ್ಷದ ಡಿಸೆಂಬರ್ ಒಳಗಾಗಿ ಇಲ್ಲಿಯವರೆಗೆ ಅಧಿಸೂಚನೆ ಹೊರಡಿಸಲಾಗಿರುವ ಎಲ್ಲಾ ಪರೀಕ್ಷೆಗಳು ನಡೆಯುತ್ತವೆ. ಒಂದು ವೇಳೆ ಹೆಚ್ಚು ಕಡಿಮೆಯಾದರೂ ಕೂಡ ಪರೀಕ್ಷೆಗಳು ನಡೆಯುತ್ತವೆ. ಚುನಾವಣೆ ನೀತಿ ಸಂಹಿತೆ ಈಗಾಗಲೇ ಅಧಿಸೂಚನೆ ಹೊರಡಿಸಲಾದ ಹುದ್ದೆಗಳಿಗೆ ಅನ್ವಯವಾಗುವುದಿಲ್ಲ.
ಇದು ವಿಶ್ವಾಸ ಅರ್ಹ ಆಕಾಂಕ್ಷಿಗಳಿಗೆ ಮಾತ್ರ. ಚೆನ್ನಾಗಿ ಅಧ್ಯಯನ ಮಾಡಿ
ಎಲ್ಲರಿಗೂ ಒಳ್ಳೆಯದಾಗಲಿ.
ನಿಮ್ಮ ಅಧ್ಯಯನಕ್ಕೆ ಅನುಕೂಲವಾಗುವ ಯಾವುದೇ ಮಾಹಿತಿ ಸಿಕ್ಕರೆ ಖಂಡಿತ ಹಂಚಿಕೊಳ್ಳುವೆ.