news

How much compensation for which morning? Compensation money to farmers account in two days

ಯಾವ ಬೆಳಗೆ ಎಷ್ಟು ಪರಿಹಾರ ಹಣ? ಎರಡೇ ದಿನದಲ್ಲಿ ರೈತರ ಖಾತೆಗೆ ಪರಿಹಾರ ಹಣ

ಪ್ರೀಯ ರೈತರೇ, ರೈತರಿಗೆ ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಕರ್ನಾಟಕ ರಾಜ್ಯ ಸರ್ಕಾರವು ಬೆಳೆ ಹಾನಿ ಆಗಿರುವ ಪರಿಹಾರದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ಇದು ಇದೀಗ ಬಂದ ಸುದ್ದಿ.

ಅಂದರೆ ಯಾವ ರೈತರ ಬೆಳೆ ಹಾನಿಯಾಗಿದೆ ಅಂತಹ ರೈತರ ಖಾತೆಗೆ ನೇರವಾಗಿ ಪರಿಹಾರ ಹಣವನ್ನು ಜಮಾ ಮಾಡಲಾಗುತ್ತದೆ.

ಯಾವ ಯಾವ ರೈತರಿಗೆ ಮತ್ತು ಯಾವ ಯಾವ ಬೆಳೆಗಳಿಗೆ ಎಷ್ಟೆಷ್ಟು ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂಬುದರ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿರುವ ಪ್ರಕಾರ ಈಗಾಗಲೇ ಬೆಳೆ ಹಾನಿಯಾಗಿರುವಂತಹ ರೈತರ ಖಾತೆಗೆ ಪರಿಹಾರ ಹಣವನ್ನು ಜಮಾ ಮಾಡಲಾಗುತ್ತದೆ.

ಇನ್ನೂ ಎರಡೇ ದಿನಗಳಲ್ಲಿ ಡೆಬಿಟ್ ಮುಖಾಂತರ ಬೆಳೆ ಹಾನಿಯಾದಂತಹ ರೈತರ ಖಾತೆಗೆ ಪರಿಹಾರ ಹಣವನ್ನು ನೇರವಾಗಿ ಜಮಾ ಮಾಡಲಾಗುವುದು ಎಂಬುದಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಸಂಬಂಧಪಟ್ಟ ಬ್ಯಾಂಕುಗಳಿಗೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಎರಡೇ ದಿನಗಳಲ್ಲಿ ಆ ಬಿಡುಗಡೆ ಮಾಡಿದ ಹಣವು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ಹಾಗಾದರೆ ಯಾವ ಯಾವ ಬೆಳೆಗಳಿಗೆ ಎಷ್ಟೆಷ್ಟು ಹಣ ಇದೆ ಅಂದರೆ ಬೆಳೆ ಹಾನಿಯಾಗಿರುವ ಪರಿಹಾರದ ಹಣ ಜಮಾ ಆಗಿದೆ ಎಂಬುದನ್ನು ನೋಡುವುದಾದರೆ,

ಅಂದರೆ NDRF ನಿಯಮದ ಪ್ರಕಾರ

ಒಣ ಭೂಮಿ ಇದ್ದಂತಹ ರೈತರಿಗೆ ಅಂದರೆ ಒಣ ಭೂಮಿಯಲ್ಲಿ ಹಾನಿದಂತಹ ಬೆಳೆಗಳಿಗೆ ಪ್ರತಿ ಹೆಕ್ಟರಿಗೆ 13,500 ಅಂದರೆ ಕೇಂದ್ರ ಸರ್ಕಾರದ ಕಡೆಯಿಂದ 6,800 ಮತ್ತು ರಾಜ್ಯ ಸರ್ಕಾರದ ಕಡೆಯಿಂದ 6,800 ರೂಪಾಯಿಗಳ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು.

# ಒಂದು ವೇಳೆ ನೀರಾವರಿ ಪ್ರದೇಶದಲ್ಲಿ ಬೆಳೆದಂತಹ ಬೆಳೆಗಳು ಅತಿ ಹೆಚ್ಚು ಮಳೆಯಿಂದ ಹಾನಿಯಾದರೆ ಅಂತಹ ರೈತರಿಗೆ ಪ್ರತಿ ಹೆಕ್ಟರಿಗೆ 25,000 ಅಂದರೆ ಕೇಂದ್ರ ಸರ್ಕಾರದ ಕಡೆಯಿಂದ13,500 ಮತ್ತು ರಾಜ್ಯ ಸರ್ಕಾರದ ಕಡೆಯಿಂದ 11,500 ರೂಪಾಯಿಗಳ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು. ಇದು ನೀರಾವರಿ ಜಮೀನಿನಲ್ಲಿ ಬೆಳೆದಂತಹ ಬೆಳೆಗಳು ಹಾನಿಯಾದರೆ ಮಾತ್ರ 25,000 ರೂಪಾಯಿಗಳನ್ನು ಪರಿಹಾರ ಹಣವಾಗಿ ಜಮಾ ಮಾಡಲಾಗುವುದು.

ಇನ್ನೂ ಇದರ ಜತೆಗೆ ಬಹು ವಾರ್ಷಿಕ ಬೆಳೆಗಲು ಹಾನಿಯಾಗಿದ್ದಾರೆ, ಪ್ರತಿ ಹೆಕ್ಟರಿಗೆ 28,000 ರೂಪಾಯಿಗಳನ್ನು ಪರಿಹಾರ ಧನವಾಗಿ ನೀಡಲಾಗುವುದು. ಇದರಲ್ಲಿ ಕೇಂದ್ರ ಸರ್ಕಾರದ ಕಡೆಯಿಂದ 18,000 ರೂಪಾಯಿಗಳು ಮತ್ತು ರಾಜ್ಯ ಸರ್ಕಾರದ ಕಡೆಯಿಂದ 10,000 ರೂಪಾಯಿಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.

ಈ ರೀತಿಯಾಗಿ ರಾಜ್ಯ ಸರ್ಕಾರ ಈಗಾಗಲೇ ಬ್ಯಾಂಕುಗಳಿಗೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದೆ. ಮತ್ತು ಅದೇ ರೀತಿಯಾಗಿ ಇನ್ನೂ ರೈತರ ಖಾತೆಗೆ ಡೆಬಿಟ್ ಮುಕಾಂತರ ನೇರವಾಗಿ ಜಮಾ ಮಾಡಲು ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ.

ಮೇಲೆ ಹೇಳಿರುವ ಪ್ರದೇಶಗಳಲ್ಲಿ ಬೆಳೆ ಹಾನಿಯಾದರೆ ನಿರ್ದಿಷ್ಟ ಪರಿಹಾರ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಮೊದಲಿಗೆ ರೈತರು ಈ ಬೆಳೆ ಹಾನಿ ಪರಿಹಾರ ಹಣವನ್ನು ಪಡೆಯಲು ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿರಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸದಿದ್ದರೆ ಬೆಳೆ ಹಾನಿ ಪರಿಹಾರ ಹಣ ಪಡೆಯಲು ಬರುವುದಿಲ್ಲ.

ರೈತರು ಈ ಬಹು ಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಅತಿ ಹೆಚ್ಚು ಮಳೆಯಿಂದ ಬೆಳೆ ಹಾನಿ ಪರಿಹಾರ ಹಣವನ್ನು ಪಡೆದುಕೊಳ್ಳಬೇಕು.

Related Articles

Leave a Reply

Your email address will not be published. Required fields are marked *

Check Also
Close
Back to top button