news

For the existence of joint action committee of various departmental and group organizations of state government employee

ರಾಜ್ಯ ಸರ್ಕಾರಿ ನೌಕರರ ವಿವಿಧ ಇಲಾಖಾ ಮತ್ತು ವೃಂದ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಸ್ತಿತ್ವಕ್ಕೆ

ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಏಳನೇ ವೇತನ ಹಾಗೂ ಎನ್ ಪಿ ಎಸ್ ಕುರಿತು ನೀಡಿರುವ ಹೇಳಿಕೆಗಳು ನಮ್ಮ ರಾಜ್ಯದ ಸಮಸ್ತ ನೌಕರರಿಗೆ ಅಸಮಾಧಾನವನ್ನು ಉಂಟುಮಾಡಿದೆ. ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾನ್ಯ ಸಿ ಎಮ್ ಅವರು ಸದ್ಯಕ್ಕೆ ವೇತನ ಪರಿಷ್ಕರಣೆ ಮಾಡುವುದಿಲ್ಲವೆಂದು ಹೇಳಿದ್ದಾರೆ.‌ಇಂತಹ ಹೇಳಿಕೆಗಳು ನಮ್ಮ ಸರ್ಕಾರಿ ನೌಕರರನ್ನು ಒಂದು ಮಾಡಲು ವೇದಿಕೆಯಾಗಿದೆ.

ಸರ್ಕಾರದ ವಿರುದ್ದ ಬೃಹತ್ ಹೋರಾಟ ಮಾಡಲು ಸಪ್ಟೆಂಬರ್29 ಸಮಯ ನಿಗದಿಯಾಗಿದೆ‌…

ಸುತ್ತೊಲೆಯ ಸಂಪೂರ್ಣ ವಿವರ….

ಬೆಂಗಳೂರು:

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮತ್ತು ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ವತಿಯಿಂದ ರಾಜ್ಯ ಸರ್ಕಾರಿ ಇಲಾಖಾ ಮತ್ತು ವೃಂದ ಸಂಘಗಳ ಪದಾಧಿಕಾರಿಗಳ ಜಂಟಿಕ್ರಿಯಾ ಸಮಿತಿಯನ್ನು ದಿನಾಂಕ 11/08/2022ರಂದು ಗುರುವಾರ ರಚಿಸಲಾಗಿದೆ.

ಸಭೆಯ ತೀರ್ಮಾನದನ್ವಯ ಈ ಎರಡು ಪ್ರಮುಖ ಬೇಡಿಕೆಗಳನ್ನು ಕೈಗೆತ್ತಿಕೊಂಡು ಹೋರಾಟಗಳನ್ನು ನಡೆಸಲು ತೀರ್ಮಾನಿಸಲಾಗಿದೆ:

1. 7ನೇ ವೇತನ ಆಯೋಗವನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ರಚಿಸುವುದು

2. ಆಡಳಿತ ಸುಧಾರಣಾ ಆಯೋಗ-2ರಲ್ಲಿ ನೌಕರರಿಗೆ ಮಾರಕವಾಗಿರುವ ಅಂಶಗಳನ್ನು ಕೈಬಿಡುವಂತೆ ಒತ್ತಾಯಿಸುವುದು.

– – ಜಂಟಿ ಕ್ರಿಯಾ ಸಮಿತಿಯ ವಿವಿಧ ಸಂಘಟನೆಗಳು:

ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ(ರಿ.), ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ, ಕರ್ನಾಟಕ ರಾಜ್ಯ NPS ನೌಕರರ ಸಂಘ(ರಿ.), ಕರ್ನಾಟಕ ವಿಧಾನ ಪರಿಷತ್‌ ಸಚಿವಾಲಯ ನೌಕರರ ಸಂಘ(ರಿ), ಕರ್ನಾಟಕ ವಿಧಾನ ಸಭೆ ಸಚಿವಾಲಯ ನೌಕರರ ಸಂಘ(ರಿ.), ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ಸಮನ್ವಯ ನೌಕರರ ಸಂಘ(ರಿ.),ಕರ್ನಾಟಕ ಸರ್ಕಾರ ಅಂಗವಿಕಲ ನೌಕರರ ಸಂಘ, ಕರ್ನಾಟಕ ಸರ್ಕಾರ ಸಚಿವಾಲಯ ‘ಡಿ’ ಗ್ರೂಪ್ ನೌಕರರ/ ಕರ್ನಾಟಕ ಸರ್ಕಾರ ಸಚಿವಾಲಯ ದಾಹನ ಚಾಲಕರ ಸಂಘ, ಕರ್ನಾಟಕ ಸರ್ಕಾರ ವಾಣಿಜ್ಯ ತೆರಿಗೆ ಸಿ & ಡಿ ಗುಂಪಿನ ನೌಕರರ ಸಂಘ, ಕರ್ನಾಟಕ ರಾಜ್ಯ ಆಡಳಿತ ನ್ಯಾಯದುಂಡಳಿ ಇಲಾಖೆಯ ನೌಕರರ ಸಂಘ, ಖಜಾನೆ ಇಲಾಖೆ ನೌಕರರ ಸಂಘ, ಕೃಷಿ ಇಲಾಖೆ ಶೀಘ್ರಲಿಪಿಗಾರರ/ವಾಹನ ಚಾಲಕರ, ಕಂದಾಯ ಇಲಾಖೆ ನೌಕರರ ಸಂಘ, ಪಶುವೈದ್ಯಕೀಯ ನೌಕರರ ಸಂಘ, ವಾರ್ತಾ ಮತ್ತು ಪ್ರಚಾರ ಇಲಾಖಾ ನೌಕರರ ಸಂಘ, ತಾಂತ್ರಿಕ ಶಿಕ್ಷಣ ಇಲಾಖಾ ನೌಕರರ ಸಂಘ, ಕರ್ನಾಟಕ ರಾಜ್ಯ ನೇತ್ರಾಧಿಕಾರಿಗಳ ಸಂಘ, ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖಾ ನೌಕರರ ಸಂಘ, ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಕರ ಸಂಘ, ಬೆಂಗಳೂರು ಜಲಮಂಡಳಿ ನೌಕರರ ಸಂಘ, ಕರ್ನಾಟಕ ರಾಜ್ಯ ಪಶುಸಂಗೋಪನಾ ಇಲಾಖೆ ನೌಕರರ ಸಂಘ,

ಇವೆರಡು ಪ್ರಧಾನ ಬೇಡಿಕೆಗಳನ್ನು ಕೈಗೆತ್ತಿಕೊಂಡು ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ಈಗಾಗಲೇ ದಿನಾಂಕ: 05.09.2022 ರಂದು ಪತ್ರಿಕಾ ಗೋಷ್ಠಿ ನಡೆಸಲಾಗಿದೆ. ದಿನಾಂಕ: 29.09.2022ರಂದು ಗುರುವಾರ “ರಾಜ್ಯಮಟ್ಟದ ಪ್ರತಿಭಟನಾ ಧರಣಿ ಕಾರ್ಯಕ್ರಮ”ವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಜಂಟಿ ಕ್ರಿಯಾ ಸಮಿತಿಯ ತೀರ್ಮಾನದಂತೆ ಕೆಳಕಂಡ ಕಾರ್ಯಕ್ರಮಗಳನ್ನು ಕೂಡಲೇ

ಹಮ್ಮಿಕೊಳ್ಳುವಂತೆ ಎಲ್ಲ ಘಟಕಗಳಿಗೆ ತಿಳಿಸಲಾಗಿದೆ:

3, “ಜಿಲ್ಲಾಮಟ್ಟದಲ್ಲಿ ಪತ್ರಿಕಾಗೋಷ್ಠಿ ಕಾರ್ಯಕ್ರಮ” – 26.09.2022: ರಾಜ್ಯದಾದ್ಯಂತ ಪ್ರತಿಭಟನಾ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಕುರಿತು ತಮ್ಮ ಸಂಘಟನೆ ಎಲ್ಲಾ ಜಿಲ್ಲಾ/ತಾಲ್ಲೂಕು ಸಮಾನ ಮನಸ್ಕ ಇಲಾಖಾ ಮತ್ತು ವೃಂದ ಸಂಘಟನೆಗಳ ಜೊತೆಗೂಡಿ ದಿನಾಂಕ: 26.09.2022ರಂದು ಜಿಲ್ಲಾ ಮಟ್ಟದಲ್ಲಿ ಪತ್ರಿಕಾಗೋಷ್ಠಿ (ಮಾದರಿಯನ್ನು ಇದರೊಂದಿಗೆ ಲಗತ್ತಿಸಿದೆ) ನಡೆಸುವುದು.

4. “ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಧರಣಿ ಕಾರ್ಯಕ್ರಮ” – 29.09.2022: ರಾಜ್ಯ ಮಟ್ಟದ ಜಂಟಿ ಕ್ರಿಯಾ ಸಮಿತಿಯು ದಿನಾಂಕ: 29.09.2022ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಟನಾ ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಮಟ್ಟದಲ್ಲಿ ದಿನಾಂಕ: 29.09.2022ರಂದು ನೌಕರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿಸಿ ಅವರ ಪಾಲ್ಗೊಳ್ಳುವಿಕೆಯ ಮೂಲಕ ಆಯಾಯ ಜಿಲ್ಲಾ ಮಟ್ಟದಲ್ಲಿ “ರಾಜ್ಯ ಮಟ್ಟದ ಧರಣಿ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳುವುದು, ಸದರಿ ಕಾರ್ಯಕ್ರಮದ ಕರಪತ್ರದ ಮಾದರಿಯನ್ನು ಈ ಮೂಲಕ ಕಳುಹಿಸಲಾಗಿದೆ. ಕರಪತ್ರಗಳನ್ನು ಎಲ್ಲಾ ಇಲಾಖೆಯ ನೌಕರರ ನಡುವೆ ವ್ಯಾಪಕವಾಗಿ ಹಂಚುವುದು. ಅಂದು ನೌಕರರು ಸಾಮೂಹಿಕವಾಗಿ ರಜೆ ಹಾಕಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೆಳಿಗ್ಗೆ 10.30ರಿಂದ ಸಂಜೆ 4.30 ರವರೆಗೆ ಧರಣಿ ನಡೆಸಲು ಸೂಚಿಸುವುದು.

ರಾಜ್ಯದ ಸರ್ಕಾರಿ ನೌಕರರಿಗೆ ಸುತ್ತೊಲೆಯನ್ನು ಹೊರಡಿಸಲಾಗಿದೆ..

ಕರ್ನಾಟಕ ಸರ್ಕಾರದ ಸಚಿವಾಲಯದ ಅಧ್ಯಕ್ಷರಾದ ಪಿ.ಗುರುಸ್ವಾಮಿ, ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಜೈಕುಮಾರ ಎಚ್ ಎಸ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ  ಎನ್.ಪಿ.ಎಸ್.ನೌಕರರ ಸಂಘದ ಅಧ್ಯಕ್ಷರಾದ ಶಾಂತಾರಾಮ ಅವರು ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ನೌಕರರಲ್ಲಿ ಮನವಿ ಮಾಡಿದ್ದಾರೆ..

Related Articles

Leave a Reply

Your email address will not be published. Required fields are marked *

Check Also
Close
Back to top button