news

Check here about crop loss compensation credited to your account with Aadhaar number.

ಆಧಾರ್ ನಂಬರ್ ಹಾಕಿ ಬೆಳೆಹಾನಿ ಪರಿಹಾರ ನಿಮ್ಮ ಖಾತೆಗೆ ಜಮಾ ಆಗಿರುವ ಕುರಿತು ಇಲ್ಲಿ ಚೆಕ್ ಮಾಡಿ.

ರಾಜ್ಯದಲ್ಲಿ ಅತಿವೃಷ್ಟಿ ಬೆಳೆ ಹಾನಿಗಿಡಾಗಿದ್ದು ಇನ್ನೆರಡು ದಿನಗಳಲ್ಲಿ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.

 ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬೆಳೆ ಹಾನಿ ಪರಿಹಾರವಾಗಿ  116 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

 ಇನ್ನೆರಡು ದಿನಗಳಲ್ಲಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು. ರಾಷ್ಟ್ರೀಯ ವಿಪತ್ತು ಪರಿಹಾರ ಮಾರ್ಗಸೂಚಿಯ ಪರಿಹಾರದೊಂದಿಗೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ .

 ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿ ಪ್ರತಿ ಹೆಕ್ಟರ್  ಒಣ ಭೂಮಿಗೆ 13500, ನೀರಾವರಿಗೆ 25000, ಬಹುವಾರ್ಷಿಕ ಬೆಳೆಗೆ 28,000 ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಳೆಯಾಶ್ರಿತ ಬೆಳೆ ಹಾನಿಗೆ ಪ್ರತಿಹತ್ಯೆಯರಿಗೆ ಎನ್ ಡಿ ಆರ್ ಎಫ್ ನಿಯಮದ ಅನುಸಾರ ಒಣ ಭೂಮಿಗೆ ಹೆಕ್ಟೇರ್ಗೆ ರೂ.10,800 ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 6800 ಸೇರಿಸಿ 13,500 ನೀಡಲಾಗುವುದು.

ನೀರಾವರಿ ಜಮೀನಿನ ಬೆಳೆ ಹಾನಿಗೆ ಎನ್ ಡಿ ಆರ್ ಎಫ್ ನಿಯಮದ ಪ್ರಕಾರ 13500 ಮತ್ತು ರಾಜ್ಯ ಸರ್ಕಾರದ 11500 ಸೇರಿ 25,000 ನೀಡಲಾಗುವುದು.

 ಬಹುವಾರ್ಷಿಕ ಬೆಳೆ ಪ್ರತಿ ಹೆಕ್ಟರಿಗೆ ಎನ್ ಡಿ ಆರ್ ಎಫ್ 18,000 ಜೊತೆಗೆ ರಾಜ್ಯ ಸರ್ಕಾರದಿಂದ 10,000 ಸೇರಿ 28,000ಗಳನ್ನು ನೇರವಾಗಿ ರೈತರು ಖಾತೆಗೆ ಜಮೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಲೇಖನದ ಕೊನೆಯಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ವೆಬ್ ಸೈಟ್ open ಆದ ಮೇಲೆ ಆಧಾರ ಸಂಖ್ಯೆ ಮೇಲೆ click ಮಾಡಿ. ನಂತರ Calamity Type “Flood” ಅಂತ select ಮಾಡಿ.
Year”2022-23″ select ಮಾಡಿ.
ನಿಮ್ಮ ಆಧಾರ್ ನಂಬರ್ ಹಾಕಿ
ನಂತರ ಅಲ್ಲಿ ತೋರಿಸುವ “Captch” Type ಮಾಡಿ

ನಿಮಗೆ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿರುವ ಕುರಿತು ಇಲ್ಲಿ ಮಾಹಿತಿ ಸಿಗುತ್ತದೆ.
ಪರಿಹಾರದ ಹಣ ಇನ್ನು ಜಮಾ ಆಗದಿದ್ದರೆ “ಹಣ ಸಂಧಾಯವಾಗಿಲ್ಲ/Payment not made” ಎಂದು ತೋರಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button