news

Central Public Service Commission invites applications for various posts

ಕೇಂದ್ರ ಲೋಕ ಸೇವಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

UPSC Recruitment 2022: ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

UPSC Recruitment 2022: ಕೇಂದ್ರ ಲೋಕ ಸೇವಾ ಆಯೋಗದಿಂದ (union Public Service Commission)  ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಗೃಹ ವ್ಯವಹಾರಗಳು ಮತ್ತು ಇತರ ಸಚಿವಾಲಯಗಳಲ್ಲಿ ಜಾರಿ ನಿರ್ದೇಶಕ ಅಧಿಕಾರಿ ಸೈಂಟಿಸ್ಟ್​ ಬಿ ಹುದ್ದೆಗೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 54 ಹುದ್ದೆಗಳ ಭರ್ತಿಗೆ ಮುಂದಾಗಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 29 ಆಗಿದೆ.
ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
ಸಂಸ್ಥೆಯ ಹೆಸರು: ಕೇಂದ್ರ ಲೋಕಸೇವಾ ಆಯೋಗ (UPSC)

ಹುದ್ದೆಯ ಹೆಸರು: ಕಾರ್ಮಿಕ ಜಾರಿ ಅಧಿಕಾರಿ, ಸೈಂಟಿಸ್ಟ್-ಬಿ

ಹುದ್ದೆಗಳ ಸಂಖ್ಯೆ: 54

ಉದ್ಯೋಗ ಸ್ಥಳ: ಕೊಚ್ಚಿ – ನವದೆಹಲಿ – ಕಾಮೃಪ್ – ಅಖಿಲ ಭಾರತ

ವೇತನ: ಕೇಂದ್ರ ಲೋಕ ಸೇವಾ ಆಯೋಗ ನಿಯಮಗಳ ಪ್ರಕಾರ

ಹುದ್ದ ಹುದ್ದೆ ಸಂಖ್ಯೆ ಪದವಿ ವೇತನ
ಹಿರಿಯ ಬೋಧಕ 1 ಎಂಎಸ್ಸಿ 35 ವರ್ಷ
ಉಪನಿರ್ದೇಶಕರು 1 ಬಿಇ 50 ವರ್ಷ
ವಿಜ್ಞಾನಿ-ಬಿ (ಫೊರೆನ್ಸಿಕ್ ಡಿಎನ್‌ಎ) 6 ಎಂಎಸ್ಸಿ 35 ವರ್ಷ
ಕಿರಿಯ ವೈಜ್ಞಾನಿಕ ಅಧಿಕಾರಿ 1 ಡಿಪ್ಲೊಮಾ, ಸ್ನಾತಕೋತ್ತರ ಪದವಿ 30 ವರ್ಷ
ವಿಜ್ಞಾನಿ-ಬಿ (ರಸಾಯನಶಾಸ್ತ್ರ) 1 ಸ್ನಾತಕೋತ್ತರ ಪದವಿ 40 ವರ್ಷ
ವಿಜ್ಞಾನಿ-ಬಿ (ಭೂ-ಭೌತಶಾಸ್ತ್ರ) 1 ಸ್ನಾತಕೋತ್ತರ ಪದವಿ 38 ವರ್ಷ
ವಿಜ್ಞಾನಿ-ಬಿ (ಭೂವಿಜ್ಞಾನ) 1 ಡಿಪ್ಲೊಮಾ 35 ವರ್ಷ
ಕಾರ್ಮಿಕ ಜಾರಿ ಅಧಿಕಾರಿ 42 ಡಿಪ್ಲೊಮಾ 30 ವರ್ಷ

ವಯೋಮಿತಿ ಸಡಿಲಿಕೆ:

ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು

ಪ.ಜಾ, ಪ. ಪಂ ಅಭ್ಯರ್ಥಿಗಳು: 05 ವರ್ಷಗಳು

ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು

ಇದನ್ನು ಓದಿ: 778 ಪಿಯು ಉಪನ್ಯಾಸಕರ ನೇಮಕಾತಿ; ಶೀಘ್ರದಲ್ಲೇ ಹೊರಬೀಳಲಿದೆ ಅಧಿಸೂಚನೆ

ಅರ್ಜಿ ಶುಲ್ಕ:

ಪ.ಪಂ, ಪ.ಜಾ, ವಿಕಲಚೇತನ ಮತ್ತು ಮಹಿಳಾ ಅಭ್ಯರ್ಥಿಗಳು: ಅರ್ಜಿ ಶುಲ್ಕ

ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: 25 ರೂ

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12 ಸೆಪ್ಟೆಂಬರ್​​ 2022

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಸೆಪ್ಟೆಂಬರ್​​ 2022

ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್: upsc.gov.in

ಅರ್ಜಿ ಸಲ್ಲಿಕೆ ವಿಧಾನ

ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಲಗತ್ತಿಸಿ

ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ

Related Articles

Leave a Reply

Your email address will not be published. Required fields are marked *

Check Also
Close
Back to top button